top of page

17th Annual Day Celebration

A traditional and affectionate environment exists in Gurukula Institute: Dr. Niketana Shetty

The environment and atmosphere around us inspire the development of everyone's personality. Dr. Niketana Shetty expressed that there is a traditional and affectionate environment in Gurukula Educational Institutions. Dr. Niketana Shetty is a Principal and HOD of Kannada department of Dr. G. Shankara Women's College, Udupi.

She was speaking at a 17th Annual day held as part of the 'Kala Vaibhogam' celebration of the Gurukula Educational Institutions on Saturday evening, December 3, 2022, at the Gurukula Institute of Bhandya Educational Trust.

The future of students who study in an education system with selfless and service spirit will be bright. Parents and teachers should think positively about shaping children's personality. Children should not be made into winning horses for points. He wanted to continue the work of paying tribute to the homeland and the society in which he was raised.

Sri. Basruru Appanna Hegde, Founder President of Bhandya Educational Trust presided. Joint Managing Trustees Sri Subhashchandra Shetty B, Smt. Anupama S. Shetty, Trustee Sri Ram Kishan Hegde were present.

Esha Shetty who achieved all India 7th Rank and State 5th Rank in 10th CBSE annual exam, Maithri B who achieved 9th rank in commerce stream and Sindhu Vadratty who achieved 10th rank in science stream in II PU Annual examination and talented students of academic stream were felicitated. The students presented a variety of cultural arts in the 'Kala Vaibhogam' program held as part of the annual celebration.

Shreya J. Hegde, the student leader of Gurukula PU College welcomed. Chief Guest was introduced by Sriraksha of Gurukula PU College. Mr. Mohan K Principal of Gurukula Public School and Mr. Arun D'Silva Principal of Gurukula PU College presented the academic report. Mrs. Sumana Pai read out the list of meritorious students. The program was moderated by Rishik N Shetty, the student of Gurukula Public School and Ayush Rao, the student leader of Gurukula Public School saluted.




ಪಾರಂಪರಿಕ ಹಾಗೂ ವಾತ್ಸಲ್ಯಮಯ ಪರಿಸರ ಗುರುಕುಲ ವಿದ್ಯಾಸಂಸ್ಥೆಯಲ್ಲಿದೆ: ಡಾ.ನಿಕೇತನಾ ಶೆಟ್ಟಿ

ನಮ್ಮ ಸುತ್ತ-ಮುತ್ತಲಿನ ಪರಿಸರ ಹಾಗೂ ವಾತಾವರಣಗಳು ಎಲ್ಲರ ವ್ಯಕ್ತಿತ್ವದ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ. ಪಾರಂಪರಿಕ ಹಾಗೂ ವಾತ್ಸಲ್ಯಮಯ ಪರಿಸರವು ಗುರುಕುಲ ವಿದ್ಯಾಸಂಸ್ಥೆಗಳಲ್ಲಿ ಇದೆ ಎಂದು ಉಡುಪಿಯ ಡಾ .ಜಿ. ಶಂಕರ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ವಕ್ವಾಡಿಯ ಗುರುಕುಲ ಸಂಸ್ಥೆಯಲ್ಲಿ ದಿನಾಂಕ ಡಿಸೆಂಬರ್ 3, 2022ರಂದು ಶನಿವಾರ ಸಂಜೆ ನಡೆದ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ 17ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ‘ಕಲಾ ವೈಭೋಗಂ’ ಸಂಭ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಸ್ವಾರ್ಥ ಹಾಗೂ ಸೇವಾ ಮನೋಭಾವ ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರುತ್ತದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಬಗ್ಗೆ ಧನಾತ್ಮಕ ಚಿಂತನೆ ಮಾಡಬೇಕು. ಮಕ್ಕಳನ್ನು ಅಂಕಗಳನ್ನು ಪಡೆದುಕೊಳ್ಳುವ ಗೆಲ್ಲುವ ಕುದುರೆಗಳನ್ನಾಗಿಸಬಾರದು. ಜನ್ಮಭೂಮಿ ಹಾಗೂ ಬೆಳೆಸಿದ ಸಮಾಜದ ಖುಣ ತೀರಿಸುವ ಕೆಲಸಗಳು ನಿರಂತರವಾಗಿರಬೇಕೆಂದರು.

ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಬಸ್ರೂರು ಶ್ರೀಯುತ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್. ಶೆಟ್ಟಿ , ಟ್ರಸ್ಟಿ ರಾಮ್ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.

10ನೇ CBSE ವಾರ್ಷಿಕ ಪರೀಕ್ಷೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಾಧನೆ ಮಾಡಿದ ಈಶಾ ಶೆಟ್ಟಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ ಮೈತ್ರಿ ಬಿ. ಎನ್. (ವಾಣಿಜ್ಯ ವಿಭಾಗದಲ್ಲಿ 9ನೇ ಸ್ಥಾನ) ಮತ್ತು ಸಿಂಧೂ ವಡರಟ್ಟಿ (ವಿಜ್ಞಾನ ವಿಭಾಗದಲ್ಲಿ 10ನೇ ಸ್ಥಾನ) ಹಾಗೂ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾರ್ಷಿಕ ಸಂಭ್ರಮದ ಅಂಗವಾಗಿ ನಡೆದ ‘ಕಲಾ ವೈಭೋಗಂ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೈವಿದ್ಯಮಯ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದರು.

ಗುರುಕುಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಾಯಕಿ ಶ್ರೇಯಾ ಜೆ. ಹೆಗ್ಡೆ ಸ್ವಾಗತಿಸಿದರು. ಶ್ರೀರಕ್ಷಾ ಪರಿಚಯಿಸಿದರು. ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ ಹಾಗೂ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್ ಡಿ’ಸಿಲ್ವ ಶೈಕ್ಷಣಿಕ ವರದಿ ಮಂಡಿಸಿದರು. ಶಿಕ್ಷಕಿ ಸುಮನಾ ಪಿ ಪೈ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಾದ ಆಯುಷ್ ರಾವ್ ವಂದಿಸಿದರು. ರಿಶೀಕ್ ಎನ್ ಶೆಟ್ಟಿ ನಿರೂಪಿಸಿದರು.


Recent Posts

See All
bottom of page