Felicitation for Rank Holders II PU Annual Examination May 2022

A felicitation ceremony for the students who passed second PUC annual examination May 2022 from Gurukula Pre-University College was held on 2nd July in the college hall. Mr. B. Appanna Hegde Basrur, Founder Chairman of Bhandya Educational Trust presided. In his presidential speech, he told the children with a short story that what children need to learn along with education is dedication and discipline, only when they incorporate it, they can achieve their goals in life.

On this occasion, Miss. Sindhu A. Wadaratti who brought 10th rank at state in II PUC Science stream and Miss. Maitri B. who brought 9th rank at the state in II PUC Commerce stream were felicitated. Also, the students who achieved at the highest level were recognized and felicitated.

Mr. Arun D'Silva, Principal of Gurukula PU College in his introductory remarks praised the hard work of the children and the guidance of their teachers on this occasion.

On this occasion Mr. Subhashchandra Shetty and Mrs. Anupama S. Shetty, Joint Managing Trustees of Bhandya Educational Trust, congratulated the students, Mr. Mohan K, Principal of Gurukula Public School, Lecturers and students were present. The program was moderated by Mr. Nagesh, Lecturer in department of Commerce, Miss. Suparna, Lecturer in Statistics welcomed and Mrs. Sushma M, Lecturer in Economics saluted.


ಗುರುಕುಲಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆ ಮೇ 2022ರಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಜುಲೈ 2ರಂದು ಕಾಲೇಜು ಸಭಾಂಗಣದಲ್ಲಿ ಜರುಗಿತು. ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಅಪ್ಪಣ್ಣ ಹೆಗ್ಡೆ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು. ಮಕ್ಕಳು ಶಿಕ್ಷಣದ ಜೊತೆಗೆ ಕಲಿಯಬೇಕಾದದ್ದು ಶ್ರದ್ಧೆ ಮತ್ತು ಶಿಸ್ತು ಅದನ್ನು ಮೈಗೂಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸಲುಸಾಧ್ಯ ಎನ್ನುವುದನ್ನು ಸಣ್ಣ ಕಥೆಯೊಂದಿಗೆ ಮಕ್ಕಳಿಗೆ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 10ನೇ ರಾಂಕ್ ತಂದುಕೊಟ್ಟ ಸಿಂಧೂ ಎ. ವಡರಟ್ಟಿ ಹಾಗೂ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರಾಂಕ್ ತಂದುಕೊಟ್ಟ ಮೈತ್ರಿ ಬಿ. ಎನ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಉನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು.

ಕಾಲೇಜು ಪ್ರಾಂಶುಪಾಲರಾದ ಶ್ರೀ ಅರುಣ್ ಡಿಸಿಲ್ವಾ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಈ ವಿದ್ಯಾರ್ಥಿಗಳ‌ ಸಾಧನೆ ಮುಂದೆಬರುವ ಎಲ್ಲಾ ಮಕ್ಕಳಿಗೂ ಮಾರ್ಗದರ್ಶಕವಾಗಬೇಕು, ಮಕ್ಕಳ ಕಠಿಣಪರಿಶ್ರಮ ತಮ್ಮ ಶಿಕ್ಷಕರ ಮಾರ್ಗದಶನ ಎರಡನ್ನೂ ಈ ಸಂದಭ೯ದಲ್ಲಿ ಶ್ಲಾಘಿಸಿದರು.

ಈಸಂದರ್ಭದಲ್ಲಿ ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಕಾರ್ಯನಿರ್ವಾಹಕರಾದ ಶ್ರೀಯುತ ಸುಭಾಶ್ಚಂದ್ರ ಶೆಟ್ಟಿ, ಶ್ರೀಮತಿ ಅನುಪಮ ಎಸ್. ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀ ಮೋಹನ್ ಕೆ., ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ನಾಗೇಶ್ ನಿರೂಪಿಸಿ, ಸಂಖ್ಯಾಶಾಸ್ತ್ರ ಉಪನ್ಯಾಸಕಿಯರಾದ ಕುಮಾರಿ ಸುಪರ್ಣ ಸ್ವಾಗತಿಸಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿಯರಾದ ಶ್ರೀಮತಿ ಸುಷ್ಮಾ ಎಂ. ವಂದಿಸಿದರು.