ಕೋಟಿ ಕಂಠ ಗಾಯನ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಭಿಲಾಷೆಯಂತೆ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಅಕ್ಟೋಬರ್ 28, 2022ರಂದು ಅತ್ಯಂತ ಉತ್ಸಾಹದಿಂದ ಗುರುಕುಲ ಪದವಿಪೂರ್ವ ಕಾಲೇಜು, ಕೋಟೇಶ್ವರ, ಕುಂದಾಪುರದಲ್ಲಿ ಹಮ್ಮಿಕೊಳ್ಳಲಾಯಿತು.

ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಕೋಟಿ ಕಂಠ ಗಾಯನದಲ್ಲಿ ಕನ್ನಡ ಗಾಯನಕ್ಕೆ ಧ್ವನಿಗೂಡಿಸಿ ಕನ್ನಡ ಮಹತ್ವವನ್ನು ತಿಳಿಸಿದ್ದಾರೆ. ಅಲ್ಲದೆ ಸಂಕಲ್ಪ ವಿಧಿಯಂತೆ ಕ್ರಮಬದ್ಧರಾಗಿ ಸಂಕಲ್ಪ ವಿಧಿಯನ್ನು ಸ್ವೀಕರಿಸಿ ಕೋಟಿ ಕಂಠ ಗಾಯನವನ್ನು ಪೂರ್ಣಗೊಳಿಸಿದ್ದಾರೆ.

ಹಾಗೆಯೇ ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಡಿ’ಸಿಲ್ವಾವರು ಪ್ರಾಸ್ತಾವಿಕ ನುಡಿಯಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಮಹತ್ವ, ಸಂಕಲ್ಪ ವಿಧಿಯ ಸಾರವನ್ನು ತಿಳಿಸಿದರು. ಕನ್ನಡ ಉಪನ್ಯಾಸಕರಾದ ರವಿಶಂಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ನಾಗೇಶ್ ಅವರು ವಂದಿಸಿದರು.