Visit of Mr. S. L. Bhojegowda, MLC of Karnataka State Legislative Council

Mr. S L Bhojegowda, who is a teacher-friendly member of a State Legislative Council south-west teacher constituency of the Karnataka State, visited the Gurukula Institution and gave several suggestions to the teachers along with some legendary episodes of the Ramayana Mahabharata and told them how important the responsibility of the teacher is to the students at every level. The personality development of every person is not possible only with textbooks, teachers should convey the information of scriptures to the students in an understandable way every day, so that they should be aware of our culture, when the teachers give such education, surely a change in the field of education is possible and it is really commendable that the Gurukula Institute in the lap of green nature is giving more emphasis on culture in education. Shri B. Appanna Hegde, the founder chairman of Bhandya Educational Trust, Kundapura, who presided over the program, in his presidential speech, said it is very rare to see such a simple, gentlemanly, experienced teacher-friendly person these days. On this occasion Mr. K. Subhashchandra Shetty and Mrs. Anupama S. Shetty, Joint Managing Trustees of Bhandya Educational Trust, Kundapura and Gurukula PU College Principal Mr. Arun D’Silva, Gurukula Public School Principal Mr. Mohan K, teaching staff were present.


ಕರ್ನಾಟಕ ರಾಜ್ಯದ ವಿಧಾನ ಪರಿಷತ್ ನ ಶಾಸಕರಾಗಿ ಶಿಕ್ಷಕರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಸ್ ಎಲ್ ಬೋಜೇಗೌಡರು ಗುರುಕುಲ ಸಮೂಹ ಸಂಸ್ಥೆಗೆ ಭೇಟಿ ನೀಡಿ ಶಿಕ್ಷಕರಿಗೆ ಹಲವಾರು ಸಲಹೆ-ಸೂಚನೆಗಳ ಜೊತೆಗೆ ರಾಮಾಯಣ ಮಹಾಭಾರತದ ಕೆಲವು ಪೌರಾಣಿಕ ಪ್ರಸಂಗಗಳ ಮೂಲಕ ಶಿಕ್ಷಕರ ಜವಾಬ್ದಾರಿ ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಎಷ್ಟು ಮುಖ್ಯ ಎಂಬುದನ್ನು ನವಿರಾಗಿ ತಿಳಿಸಿದರು .ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಕೇವಲ ಪಠ್ಯಪುಸ್ತಕದಿಂದ ಮಾತ್ರ ಸಾಧ್ಯವಿಲ್ಲ, ಶಿಕ್ಷಕರು ಪ್ರತಿದಿನ ಸದ್ಗ್ರಂಥಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು ಆ ಮೂಲಕ ನಮ್ಮ ಸಂಸ್ಕಾರ ಸಂಸ್ಕೃತಿಯ ಅರಿವು ಅವರಲ್ಲಿ ಬರುವಂತೆ ಮಾಡಬೇಕು,ಆ ರೀತಿ ಶಿಕ್ಷಣವನ್ನು ಶಿಕ್ಷಕರು ನೀಡಿದಾಗ ಖಂಡಿತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ ಹಾಗೂ ಹಸಿರು ನಿಸರ್ಗದ ಮಡಿಲಿನಲ್ಲಿರುವ ಗುರುಕುಲ ಸಂಸ್ಥೆ ಶಿಕ್ಷಣದಲ್ಲಿ ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಭಾಂಡ್ಯ ಎಜುಕೇಷನಲ್ ಟ್ರಸ್ಟ್‌ ಸಂಸ್ಥಾಪಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಇಂಥ ಸರಳ ಸಜ್ಜನಿಕೆಯ ಅನುಭವಿ ಶಿಕ್ಷಕರ ಸ್ನೇಹಿ ವ್ಯಕ್ತಿ ಇಂದಿನ ದಿನಗಳಲ್ಲಿ ಕಾಣುವುದು ಬಹಳ ಅಪರೂಪ, ಇವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಬೇಕು ಶಿಕ್ಷಣ ಕ್ಷೇತ್ರಕ್ಕೆ ಇವರಿಂದ ಇನ್ನಷ್ಟೂ ಕೊಡುಗೆ ಸಿಗುವಂತಾಗಲಿ ಎಂದು ಶುಭ ಹಾರೈಸಿ,ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಯುತ ಸುಭಾಶ್ಚಂದ್ರ ಶೆಟ್ಟಿ ಹಾಗೂ ಶ್ರೀಮತಿ ಅನುಪಮ ಶೆಟ್ಟಿ ಹಾಗೂ ಶಾಲಾ ಪ್ರಾಂಶುಪಾಲರಾದ ಶ್ರೀ ಮೋಹನ್. ಕೆ ಕಾಲೇಜು ಪ್ರಾಂಶುಪಾಲರಾದ ಶ್ರೀಯುತ ಅರುಣ್ ಡಿಸಿಲ್ವಾ ಮತ್ತು ಎಲ್ಲಾ ಶಿಕ್ಷಕ ವೃಂದದವರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.