ಕುಂದಾಪುರ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾವಳಿ


ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ಜರುಗಿದ 2022-23ನೇ ಶೈಕ್ಷಣಿಕ ಸಾಲಿನ ಕುಂದಾಪುರ ತಾಲೂಕು ಮಟ್ಟದ ಅಂತರ ಕಾಲೇಜು ಪುಟ್ಬಾಲ್ ಪಂದ್ಯಾಟವು ಕೋಟೇಶ್ವರದ ವಕ್ವಾಡಿಯ ಗುರುಕುಲ ಕ್ರೀಡಾಂಗಣದಲ್ಲಿ ದಿನಾಂಕ 08/09/2022 ಗುರುವಾರರಂದು ಜರಗಿತು.

2022-23 ಕುಂದಾಪುರ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿದ ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಯುತ ಸುಭಾಶ್ಚಂದ್ರ ಶೆಟ್ಟಿ ಅವರು ಪಂದ್ಯಾವಳಿಗೆ ಆಗಮಿಸಿದ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿ, ಬಹುಮಾನ ಪಡೆಯುವುದಕ್ಕಿಂತ ಭಾಗವಹಿಸುವಿಕೆ ಬಹಳ ಮುಖ್ಯವಾದದ್ದು ಹಾಗೂ ಸತತ ಪ್ರಯತ್ನದಿಂದ ಅಂತರಾಷ್ಟ್ರೀಯ ಮಟ್ಟದವರೆಗೂ ತಲುಪಲು ಸಾಧ್ಯವೆಂದು ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಅತಿಥಿಗಳಾಗಿ ಆಗಮಿಸಿದ ಶ್ರೀ ಜೀವನ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಪದವಿಪೂರ್ವ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಆಗಿರುವ ಇವರು ಹಿಂದಿನ ಎರಡು ವರ್ಷಗಳನ್ನು ಯಾವುದೇ ಕಾರ್ಯಕ್ರಮಗಳನ್ನು ಮಾಡಲಾಗಲಿಲ್ಲ ಹಾಗೂ ಇಂದು ಮಳೆಯ ಕಾರಣದಿಂದಾಗಿ ಅಡಚಣೆಗಳಿದ್ಧರೂ ನಿರ್ವಿಘ್ನವಾಗಿ ಪಂದ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಫುಟ್ಬಾಲ್ ಪಂದ್ಯಾವಳಿಯ ಸ್ಪರ್ಧಿಗಳಿಗೆ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಪ್ರಮಾಣ ವಚನ ವಾಚಿಸಿದರು. ಕುಂದಾಪುರ ತಾಲೂಕಿನ 2022-23ನೇ ಸಾಲಿನ ಕ್ರೀಡಾಕೂಟಗಳ ಸಂಯೋಜಕರು ಶ್ರೀ ರಾಮ್ ಶೆಟ್ಟಿ ಉಪಸ್ಥಿತರಿದ್ದರು.

ಈ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರು ಶ್ರೀ ನಾಗೇಶ್ ನಿರ್ವಹಿಸಿ, ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕರು ಕುಮಾರಿ ಸುಪರ್ಣ ಸ್ವಾಗತಿಸಿದರು.


ಆಟವು ಒಂದು ವಿಶೇಷ ಚಟುವಟಿಕೆ, ಸೋಲೆ ಗೆಲುವಿನ ಸೋಪಾನ ಹಾಗೂ ಮನಸ್ಸು ಯಾವಾಗಲೂ ಧನಾತ್ಮಕ ಚಿಂತನೆ ಮಾಡಬೇಕು ಅಂತೆಯೇ ಸೋತೆವು ಎಂದು ಕುಗ್ಗದೆ, ಗೆದ್ದವರು ಮುಂದಿನ ಹಂತಕ್ಕೆ ಉತ್ತಮ ತಯಾರಿಯನ್ನು ಮಾಡುವಂತಾಗಲಿ ಎಂದು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮ ಎಸ್. ಶೆಟ್ಟಿರವರು ಮಾತನಾಡಿದರು.

ಕುಂದಾಪುರ ತಾಲೂಕು ಪದವಿಪೂರ್ವ ಕಾಲೇಜು ವ್ಯಾಪ್ತಿಯ 9 ತಂಡಗಳು ಈ ಫುಟ್ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದು ಫೈನಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ಕುಂದಾಪುರ ಮತ್ತು ತಂಡವು ಬ್ಯಾರೀಸ್ ಪದವಿ ಪೂರ್ವ ಕಾಲೇಜು, ಕೋಡಿ ಪರಾಭವಗೊಳಿಸಿ ಜಯಶಾಲಿಯಾಗಿದ್ದು ಎರಡು ತಂಡಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳ ಜೊತೆಗೆ ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕ್ರಿಸ್ ಒಲಿವೇರಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಈ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮವನ್ನು ಆಂಗ್ಲಭಾಷಾ ವಿಭಾಗದ ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಲೋನ ಡಿಸೋಜಾ ನಿರ್ವಹಿಸಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅರುಣ್ ಡಿ’ಸಿಲ್ವಾರವರು ವಂದಿಸಿದರು.