top of page

67ನೇ ಕರ್ನಾಟಕ ರಾಜ್ಯೋತ್ಸವ

ಗುರುಕುಲ ಸಂಸ್ಥೆಯಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ದಿನಾಚರಣೆಯನ್ನುಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭವನ್ನು ಭಾಂಡ್ಯ ಎಜುಕೇಷನಲ್ ಟ್ರಸ್ಟ್‌ನ ಜಂಟಿ ಆಡಳಿತ ಟ್ರಸ್ಟಿಗಳಾದ ಶ್ರೀಮತಿ ಅನುಪಮಾ ಎಸ್. ಶೆಟ್ಟಿ, ಗುರುಕುಲ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀ ಅರುಣ್ ಡಿಸಿಲ್ವ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಶ್ರೀ ಮೋಹನ್ ಕೆ, ಬೋಧಕ ಮತ್ತು ಬೋಧಕೇತರ ವೃಂದದವರು ಹಾಗೂ ಶಾಲೆಯ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


67ನೇ ಕರ್ನಾಟಕ ರಾಜ್ಯೋತ್ಸವದ ಆಚರಣೆಯನ್ನು ತಾಯಿ ಭುವನೇಶ್ವರಿ ಮಾತೆಗೆ ನಮಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಅನುಪಮಾ ಎಸ್. ಶೆಟ್ಟಿ ಅವರು ಆಂಗ್ಲ ಭಾಷೆಯನ್ನು ವ್ಯವಹಾರಿಕ ಭಾಷೆಯಾಗಿದ್ದು ಎಂದಿಗೂ ನಮ್ಮ ಮಾತೃಭಾಷೆಯನ್ನು ಮರೆಯಬಾರದು ಎಂದರು. ಭಾಷೆಯ ಹಿಡಿತ ಬರಬೇಕೆಂದರೆ ಪತ್ರಿಕೆಯನ್ನು ಪ್ರತಿ ದಿನ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಯುವಜನತೆಗೆ ಸಂದೇಶವನ್ನು ಕೊಟ್ಟರು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪುರವರ ಕವಿವಾಣಿಯಂತೆ ಕನ್ನಡ ರಾಜ್ಯೋತ್ಸವದ ಉತ್ಸವವು ಇಂದಿಗೆ ಸೀಮಿತವಾಗಿರದೆ ಕನ್ನಡವನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ನಂತರಶಾಲಾವಿದ್ಯಾರ್ಥಿಗಳುವಿವಿಧನೃತ್ಯ, ಹಾಡುಗಳಮೂಲಕಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಕಾರ್ಯಕ್ರಮವನ್ನುಕುಮಾರಿನಿಧಿಮತ್ತುಮತ್ತುಕುಮಾರಿಧನ್ವಿನಿರೂಪಿಸಿದರು, ಕುಮಾರಿಅಸ್ಮಾಸ್ವಾಗತಿಸಿ, ಕುಮಾರಿಪ್ರತೀಕ್ಷಾಧನ್ಯವಾದವಿತ್ತರು.



Recent Posts

See All
bottom of page